ಕೋಲ್ಕತ್ತಾ: ಚುನಾವಣೆಗೆ ಇನ್ನು ಕೆಲವೇ ಕೆಲವು ಗಂಟೆಗಳು ಬಾಕಿ ಇರುವಾಗ ತೃಣ ಮೂಲ ಕಾಂಗ್ರೆಸ್ ನ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಒಂದು ದಂಗೆಕೋರ, ಇನ್ನೊಂದು ಪ್ರಾಯೋಜಕತ್ವ ದಂಗೆ ಹಾಗೂ ಮತ್ತೊಂದು. ಯಾವುದೇ ಕೈಗಾರಿಕೋದ್ಯಮಗಳನ್ನು ಅಭಿವೃದ್ಧಿ ಮಾಡದೇ, ಕೇವಲ ತಮ್ಮ ಗಡ್ಡ ಮಾತ್ರ ಬೆಳಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ವಿರುದ್ಧ ಬ್ಯಾನರ್ಜಿ ಸಿಡಿದಿದ್ದಾರೆ.


"ಮೇ ತಿಂಗಳ ಅಂತ್ಯಕ್ಕೆ ಏರ್ ಇಂಡಿಯಾ ಖಾಸಗೀಕರಣ ಮುಕ್ತಾಯ"


ಒಮ್ಮೊಮ್ಮೆ ತನ್ನನ್ನು ತಾನೇ ಗಾಂಧಿಜಿಗಿಂತ, ರವಿಂದ್ರನಾಥ್ ಠಾಕೂರ್(Rabindranath Tagore) ಅವರಿಗಿಂತ ಮೇಲು ಅಂತಂದುಕೊಳ್ಳುತ್ತಾರೆ. ಒಮ್ಮೊಮ್ಮೆ ತಮ್ಮನ್ನು ತಾವೇ ಸ್ವಾಮಿ ವಿವೇಕಾನಂದರೆಂದು ಕರೆದುಕೊಳ್ಳುತ್ತಾರೆ. ತಮ್ಮ ಹೆಸರನ್ನೇ ಸ್ಟೇಡಿಯಂ ಗೆ ಇಟ್ಟುಕೊಳ್ಳುತ್ತಾರೆ. ಒಂದು ದಿನ ಇಡೀ ದೇಶವನ್ನು ಮಾರಿ ದೇಶಕ್ಕೆ ತನ್ನ ಹೆಸರನ್ನೇ ಇಡುತ್ತಾರೆ. ಅವರಿಗೆ ಏನೋ ಆಗಿರಬಹುದು ಎಂದು ಗುಡುಗಿದ್ದಾರೆ.


PF ಗೆ ಸಂಬಂಧಿಸಿದ ಸಮಸ್ಯೆಗೆ ಇನ್ಮುಂದೆ WhatsApp ನಲ್ಲಿ ಸಿಗಲಿದೆ ಪರಿಹಾರ!


ಇನ್ನು, ಕೋವಿಡ್ ವ್ಯಾಕ್ಸಿನೆಶನ್ ಪ್ರಮಾಣ ಪತ್ರಕ್ಕೆ ತಮ್ಮ ಫೋಟೋ(Photos)ವನ್ನು ಹಾಕಿಸಿಕೊಳ್ಳುತ್ತಾರೆ. ಇಸ್ರೋ ಬಾಹ್ಯಾಕಾಶ ಸಂಸ್ಥೆಯಿಂದ ತನ್ನ ಫೋಟೋವನ್ನು ಬಾಹ್ಯಾಕಾಶಕ್ಕೆ ಕಳುಹಿಸುವಂತೆ ಮಾಡುತ್ತಾರೆ. ಅವರ ಹೆಸರನ್ನು ದೇಶಕ್ಕೆ ಇಡುವ ದಿನ ಬರುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.


COVID-19 ಪ್ರಕರಣಗಳ ಹೆಚ್ಚಳ: ಲಾಕ್ ಡೌನ್ ಪರಿಹಾರವಲ್ಲ- ದೆಹಲಿ ಆರೋಗ್ಯ ಸಚಿವ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.